Wednesday, 12 September 2012


ಕಾಲೇಜು ವಿದ್ಯಾಥಿ೯ಗಳಿಗೆ ಕೖಷಿ ಖುಷಿ ಪಾಠ

- ಅಳುಕಿನಿಂದ ಗದ್ದೆಯೊಳಗಿಳಿದು ಸಂಭ್ರಮಪಟ್ಟ ವಿದ್ಯಾಥಿ೯ಗಳು
- ಹೂಟಿ ಹೊಡೆದರು, ನಾಟಿ ಮಾಡಿದರು



ಶ್ರೀಕಾಂತ ಭಟ್

ಶಿವಮೊಗ್ಗ- ಹೈಫೈ ಉದ್ಯೋಗದ ಕನಸು ಹೊತ್ತು ಸೈನ್ಸ್್, ಆಟ್ಸ್್೯, ಕಾಮಸ್್೯ ಎಂದು ಓದಿಕೊಂಡಿದ್ದ ಮಕ್ಕಳು
ಅಂದು ಗದ್ದೆಗಿಳಿದಿದ್ದರು. ಓದು, ಕನಸು ಎಲ್ಲವನ್ನೂ ಪಕ್ಕಕ್ಕಿಟ್ಟು ಕೖಷಿಲೋಕದಲ್ಲಿ ಒಂದು ಸುತ್ತುಹಾಕಿಬಂದು ಸಂಭ್ರಮಿಸಿದ ಕ್ಷಣವದು.
ಇದು ಕೖಷಿ ಪಾಠದ ಒಂದು ಝಲಕ್್.
ಗ್ರಾಮೀಣ ಭಾಗದಲ್ಲಿ  ಕೖಷಿ ಕೇವಲ ಮಧ್ಯವಯಸ್ಕರಿಗೆ  ಸೀಮಿತ ಎನ್ನುವಂತಾಗಿದೆ. ಅಲ್ಲದೆ ಮಲೆನಾಡಿನಲ್ಲಿ  ಕೖಷಿ ಚಟುವಟಿಕೆಗಳಿಗೆ ಕಾಮಿ೯ಕರೆ ಸಿಗದಂತಾಗಿದ್ದು ಕೖಷಿಕರು  ಕೖಷಿಯಿಂದ ದೂರಾಗುತ್ತಿದ್ದಾರೆ. ಇಂತಹ ಸಂದಭ೯ದಲ್ಲಿ ಕೖಷಿಯ ಸಮಸ್ಯೆಗೊಂದು  ಪರಿಹಾರ  ಕಂಡುಕೊಳ್ಳುವ  ಪ್ರಯತ್ನ  ಒಂದು ನಡೆಯಿತು. ಅದಕ್ಕಾಗಿಯೇ ಶಾಲೆಯ ವಿದ್ಯಾಥಿ೯, ವಿದ್ಯಾಥಿ೯ನಿಯರಿಗೆ ಕೖಷಿಪಾಠ ಹೇಳಿಕೊಡಲು ಶ್ರೀಕ್ಷೇತ್ರ  ಧಮ೯ಸ್ಥಳ  ಗ್ರಾಮೀಣಾಭಿವೖದ್ಧಿ ಯೋಜನೆ ವೇದಿಕೆ ಕಲ್ಪಿಸಿತ್ತು.
ಜಿಲ್ಲೆಯ  ತೀಥ೯ಹಳ್ಳಿ ತಾಲೂಕು ಮಾಳೂರು ಗ್ರಾಮದಲ್ಲಿ ಈ ವೇದಿಕೆ ಸೖಷ್ಟಿಯಾಗಿತ್ತು. ಪದವಿ ಪೂರ್ವ ಕಾಲೇಜಿನ ವಿದ್ಯಾಥಿ೯ಗಳನ್ನೆಲ್ಲ ಗದ್ದೆಗಿಳಿಸಿ, ಕೖಷಿಯ ಪದ್ಧತಿ, ರೀತಿ ನೀತಿ, ಸಂಪ್ರದಾಯವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. ಅನಕ್ಷರಸ್ಥ ಮಹಿಳಾ ಕೖಷಿ  ಪಂಡಿತರು ಚಾಚುತಪ್ಪದೆ ಕೖಷಿ ಪಾಠ ಹೇಳಿಕೊಟ್ಟರು.
ಅಪರೂಪದ ಅವಕಾಶ ಎಂದೋ ಅಥವಾ  ಮಣ್ಣಿಗಿಳಿಯುವ  ಸಂಭ್ರಮವೋಗೊತ್ತಿಲ್ಲ  ವಿದ್ಯಾಥಿ೯ವಿದ್ಯಾಥಿ೯ನಿಯರಂತು ಇರುವುದರಲ್ಲೆ ಕೊಂಚಕೊಂಚ ತಿಣುಕುತ್ತಲೇ ನಾಟಿಗೆ ಇಳಿದೇ  ಬಿಟ್ಟಿದ್ದರು. ಹೇಗೆ  ನೆಡಬೇಕು, ಎಷ್ಟೆಷ್ಟು ಪ್ರಮಾಣ ನಡೆಬೇಕು ಎಂದು ಹಿರಿಯರಿಂದ ಮಾಹಿತಿ ಪಡೆದು ನಾಟಿ ಆರಂಭಿಸಿದರು. ಮೊದಮೊದಲು ನಿಧಾನವಾಗಿ ನಡೆದ ನೆಟ್ಟಿಕಾಯ೯ ನಂತರ  ವೇಗ  ಪಡೆದುಕೊಂಡಿತು. ಮತ್ತೊಂದೆಡೆ  ವಿದ್ಯಾಥಿ೯ಗಳು  ನಾವೇನು ಕಮ್ಮಿ ಇಲ್ಲ ಅನ್ನುವಂತೆ  ನೇಗಿಲು  ಹೂಡಲು ಆರಂಭಿಸಿದರು. ಟ್ರಿಲ್ಲರ್್ ಚಲಾಯಿಸಿ ಗದ್ದೆಯನ್ನು ಹದ ಮಾಡಿದರು. ಅಷ್ಟೆ  ಅಲ್ಲದೆ  ಗಂಡಾಳಿನ  ಕೆಲಸಗಳಲ್ಲಿ ಭಾಗಿಯಾಗಿ ಅಂತಿಮವಾಗಿ ನೆಟ್ಟಿಯನ್ನೂ ಮಾಡಿ  ಸೈ ಅನಿಸಿಕೊಂಡರು.
ಅಧ೯ ದಿನವಿಡಿ ನಡೆದ  ಸಾಮೂಹಿಕ ನಾಟಿಕಾಯ೯ ವಿದ್ಯಾಥಿ೯ಗಳಿಗೆ ನೇಗಿಲಯೋಗಿಯ ಪಾಠದ ಅನುಭವದ ಜೊತೆಗೆ ಕೆಸರು ನೀರಿನಲ್ಲಿ ಸಂಭ್ರಮದ ಅಲೆಯನ್ನೆಬ್ಬಿಸಿತು.
ಅದೇ ರೀತಿ ಗಂಟೆಗಟ್ಟಲೇ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಮಾಡುವ ಮೇಸ್ಟ್ರುಗಳು ಕೂಡ ಕೈ ಕೆಸರು ಮಾಡಿಕೊಂಡರು. ವಿದ್ಯಾಥಿ೯ಗಳೊಂದಿಗೆ ಸೇರಿ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ವಿದ್ಯಾಥಿ೯ಗಳಿಗೆ ಪ್ರೋತ್ಸಾಹ ನೀಡಿದರು.
ಗದ್ದೆಯ ಕೆಲಸದಲ್ಲಿ ತೊಡಗಿಕೊಂಡಿದ್ದು ಖುಷಿ ತಂದಿತು ಎಂದು ಇದೇ ಸಂದಭ೯ದಲ್ಲಿ ಕಾಲೇಜು ವಿದ್ಯಾಥಿ೯ಗಳು ಅಭಿಪ್ರಾಯಪಟ್ಟರು. ಮತ್ತೆ ಕೆಲವರು, ನಮ್ಮ ಮನೆಯಲ್ಲಿ ಗದ್ದೆ ಇದ್ದರೂ ಕೆಲಸ ಮಾಡಿದ ಅನುಭವ ಇರಲಿಲ್ಲ. ಇಲ್ಲಿ ಕೆಲಸ ಮಾಡಿ ಸಂಭ್ರಮಿಸಿದೆವು ಎಂದರು.
ಇಂದಿನ ಯುವ ಜನರಲ್ಲಿ ಕೖಷಿ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೖತಿ ಮೂಡಿಸುವ ಉದ್ದೇಶದಿಂದ ಈ ಪ್ರಯತ್ನ ನಡೆಸಿದೆವು. ವಿದ್ಯಾಥಿ೯ಗಳು ಸಾಕಷ್ಟು ಸಂಭ್ರಮಪಟ್ಟರು ಎಂದು ಧಮ೯ಸ್ಥಳ ಗ್ರಾಮಾಭಿವೖದ್ಧಿ ಯೋಜನೆಯ ಕೖಷಿ ಮೇಲ್ವಿಚಾರಕ ಶಶಿಧರ್್ ಕನ್ನಡಪ್ರಭಕ್ಕೆ ವಿವರಿಸಿದರು.
ಮಲೆನಾಡು ಭಾಗದಲ್ಲಿ ಮಕ್ಕಳು ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ ನಾವು ಬೆಂಗಳೂರಿಗೆ ಹೋಗುವವರು ಎಂಬ ಭಾವನೆ ಬಂದು ಬಿಟ್ಟಿದೆ. ಇಂತವರ ಮನಸ್ಸಿನಲ್ಲಿ ಕೖಷಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿತ್ತು ಎಂದು ತಿಳಿಸಿದರು.

ಇಷ್ಟಕ್ಕೆ ಮುಗೀಲಿಲ್ಲ- ನಾವು ರೈತರನ್ನು ಕೈ ಬಿಡಲ್ಲ- ಮಧು

ಮಧು ಉವಾಚ
- ಹೋರಾಟ ಪ್ರಶ್ನಿಸುವ ಹಕ್ಕು ಬಿಜೆಪಿ, ಕಾಂಗ್ರೆಸ್್ಗಿಲ್ಲ
- ನನ್ನ ಜೊತೆ ಹೆಜ್ಜೆ ಹಾಕಿದವರಲ್ಲಿ ಅಪ್ಪಾಜಿಯ ಕಂಡೆ
- ಹೋರಾಟ ಮಾಡಿ ಅಧಿಕಾರ ಪಡೆದ ಬಿಎಸ್್ವೈ ಈಗ ಎಲ್ಲಿಹೋದ್ರು?


ಸಂದಶ೯ನ- ಶ್ರೀಕಾಂತ ಭಟ್್

ಶಿವಮೊಗ್ಗ- ಹತ್ತಾರು ನಾಯಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ಕೊಟ್ಟ ಬಗರ್್ಹುಕುಂ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಬೀದಿಗಳಿದ ಮಧು ಬಂಗಾರಪ್ಪ ಈಗ ಜಿಲ್ಲೆಯಲ್ಲಿ ಲೈಮ್್ಲೈಟ್್ನಲ್ಲಿರುವ ಯುವ ನಾಯಕ. ಕಳೆದ ತಿಂಗಳು ಒತ್ತುವರಿ ತೆರವಿನ ದುಸ್ವಪ್ನ ಕಂಡಿದ್ದ ಸೊರಬ ತಾಲೂಕಿನ ಕೆರೆಹಳ್ಳಿಯಿಂದ ಹೊರಟ ಜೆಡಿಎಸ್್ ಪಾದಯಾತ್ರೆಯನ್ನು ಮುನ್ನೆಡಿಸಿದ್ದು ಅವರೇ. ದಾರಿಯುದ್ದಕ್ಕೂ ಜಿಟಿಜಿಟಿ ಮಳೆ, ಕಿಚಿಪಿಚಿ ಕೆಸರನ್ನು ಲೆಕ್ಕಿಸದೇ ಪಾದಯಾತ್ರೆ ಭಾನುವಾರ ಶಿವಮೊಗ್ಗದಲ್ಲಿ ಸಂಪನ್ನಗೊಂಡಿತು. ಈ ಹೊತ್ತಿನಲ್ಲಿ ಮಧು ಬಂಗಾರಪ್ಪ ಮುಖದಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು. ಪಾದಯಾತ್ರೆಯಿಂದಾಗಿ ಕಾಲಿನಲ್ಲಿ ಬೊಬ್ಬೆ ಎದ್ದಿದ್ದರೂ ಉತ್ಸಾಹದಿಂದ ಓಡಾಡಿಕೊಂಡಿದ್ದ ಮಧು ಬಂಗಾರಪ್ಪ ಅವರನ್ನು ಕನ್ನಡಪ್ರಭ ಮಾತಿಗೆಳೆದಾಗ ಅವರು ಅನೇಕ ಸಂಗತಿಗಳನ್ನು ಹರಿಯಬಿಟ್ಟರು.

1. ಯಾತ್ರೆಯ ಗುರಿ ಈಡೇರಿತಾ?
ಗುರಿ ಈಡೇರಿತಾ ಎನ್ನುವುದಕ್ಕೆ, ಗುರಿ ಈಡೇರಿಸುವ ಕೊಡುವ ಹಕ್ಕು ನಮ್ಮ ಕೈಯಲ್ಲಿ ಇಲ್ಲ. ನಾವು ವಿರೋಧಪಕ್ಷದಲ್ಲಿದ್ದೇವೆ. ಅದು ಯಾವುದೇ ಕಾರಣಕ್ಕೂ ಈಡೇರಿಸುತ್ತೇವೆ ಎಂಬುದು ಬರುವುದಿಲ್ಲ. ಸಾವ೯ಜನಿಕವಾಗಿ ಒಳ್ಳೆಯದಾಗಬೇಕೆಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆ ಇಟ್ಟಿದ್ದೇವೆ.

2. ಯಾತ್ರೆ ಹಿಂದಿನ ಸ್ಪಷ್ಟ ಉದ್ದೇಶ ಏನಾಗಿತ್ತು?
ಬಗರ್್ ಹುಕುಂ ಒಂದು ಸೂಕ್ಷ್ಮ ವಿಚಾರ. 50-60 ವಷ೯ದ ಹಿಂದೆ ನನ್ನ ದೇಶ, ನನ್ನ ಜಾಗ, ದುಡಿದು ತಿನ್ನುತ್ತೇನೆ ಎಂದು ಜನರ ಭಾವನೆ ಇತ್ತು. ಹೀಗಾಗಿ ಬಗರ್್ಹುಕುಂ ಸೖಷ್ಟಿಯಾಗಿದೆ. ಸೈನಿಕರು ರಾಷ್ಟ್ರ ಕಾಪಾಡುತ್ತಾರೆ. ಅಂತಹ ರಕ್ಷಣೆ ಕೊಡುವ ಜವಾನನಿಗೆ ಕೊಡುವ ಬೆಂಬಲ ಗೌರವವನ್ನು ಹಸಿದ ಹೊಟ್ಟೆಗೆ ಅನ್ನ ಕೊಟ್ಟುವ ರೈತನಿಗೂ ನೀಡಬೇಕು. ಬಗರ್್ ಹುಕುಂ ಎಂದಾಕ್ಷಣ ರೈತರೇನು ಭಯೋತ್ಪಾದಕರೇ, ಅವರಿಗೆ ಹಕ್ಕುಗಳಿಲ್ಲವೇ. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವವರು ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ನಿಧಾ೯ರಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಸುವ ದೖಷ್ಟಿಯಿಂದ ಹೋರಾಟ. ಇದರ ಹೊರತಾಗಿ ಬೇರೆ ಉದ್ದೇಶವಿಲ್ಲ.

3. ಮಧು ಬಂಗಾರಪ್ಪ ಇಷ್ಟು ದಿನ ಮಲಗಿದ್ದರು, ಈಗ ಎದ್ದಿದ್ದಾರೆ ಹಾಗೆಯೇ ಇಷ್ಟು ದಿನ ಏನು ಮಾಡುತ್ತಿದ್ದರೂ ಎಂದು ಆಡಳಿತ ಪಕ್ಷದ ನಾಯಕರು ಹೋರಾಟದ ಬಗ್ಗೆ ಟೀಕೆ ಮಾಡಿದರು, ನೀವೆನಂತೀರಾ?
ಹೌದು ನಾನು ಮಲಗಿದ್ದೆ ಎಂದೇ ಹೇಳುತ್ತೇನೆ. ಹಾಗಾದರೆ ಇಷ್ಟು ದಿನ ಟೀಕೆ ಮಾಡಿದವರು ಏನು ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಲಿ. ಅಧಿಕಾರವಿದೆ, ಕೇಂದ್ರದ ಮೇಲೆ ಬಿಗಿ ಪಟ್ಟು ಹಾಕಿ ಕಾನೂನು ತಿದ್ದುಪಡಿ ಮಾಡಿಸಬಹುದಿತ್ತಲ್ಲವೇ. ಅವರಿಂದೇಕೆ ಸಾಧ್ಯವಾಗಲಿಲ್ಲ. ಖಚು೯ಗಾಗಿ ಹೋರಾಟ ಮಾಡಿ ರೈತರನ್ನೇ ಮರೆತರು. ನನ್ನ ವಯಸ್ಸು, ಅನುಭವ ಅವರಿಗಿಂತ ಕಡಿಮೆಯೇ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಟೀಕಿಸುವ ಬದಲು ಕೆಲಸ ಮಾಡಿ ತೋರಿಸಲಿ. ರೈತರ ಕಷ್ಟಕ್ಕೆ ಆಗಿಬರಲಿ.

4. ನಿಮ್ಮ ಹೋರಾಟವನ್ನು ಪ್ರಶ್ನಿಸುವ ಪ್ರತಿಪಕ್ಷಗಳಿಗೆ ನಿಮ್ಮ ಪ್ರತಿ ಪ್ರಶ್ನೆಗಳೇನು?
ಬಿಎಸ್್ ಯಡಿಯೂರಪ್ಪ ಬಗರ್್ಹುಕುಂ ರೈತರ ಪರವಾಗಿ ಪಾದ ಯಾತ್ರೆ ಮಾಡಿ ನಾಯಕರಾದರು. ಈಗ ಎಲ್ಲಿ ಹೋಯಿತು ಹೋರಾಟ. ಅವರಿಂದೇಕೆ ಹಕ್ಕುಪತ್ರಕೊಡಿಸಲು ಸಾಧ್ಯವಾಗಿಲ್ಲ ಎಂದು ಕೇಳುತ್ತೇನೆ. ನಿಮಗೆ ನಮ್ಮ ಹೋರಾಟ ಪ್ರಶ್ನಿಸುವ ಹಕ್ಕಿಲ್ಲ ಎಂದೇ ಬಿಜೆಪಿ ಹಾಗೂ ಕಾಂಗ್ರೆಸ್್ ನಾಯಕರಿಗೆ ಹೇಳುತ್ತೇನೆ ಎಂದರು.

5. ಯಾತ್ರೆಯಲ್ಲಿ ಕಂಡ ವಿಶೇಷ ಅನುಭವ?
ಪ್ರತಿ ಹೆಜ್ಜೆ ಹೆಜ್ಜೆಗೂ ಕಂಕಣ ಕಟ್ಟಿದರು, ಆರತಿ ಬೆಳಗಿದರು, ಆತ್ಮೀಯವಾಗಿ ಸ್ವಾಗತಿಸಿದರು. ನಿರೀಕ್ಷೆಗೆ ಮೀರಿದ ಬೆಂಬಲ ಸಿಕ್ಕಿತು. ಅದೇ ರೀತಿ ಹೊಸನಗರದ ಶೇಷಪ್ಪ ಎಂಬುವರು ದಾರಿಯಲ್ಲಿ ಬಿದ್ದಿದ್ದ ಕರಪತ್ರವನ್ನು ನೋಡಿ ಹೋರಾಟದಲ್ಲಿ ಪಾಲ್ಗೊಂಡರು, ಪ್ರತಿ ದಿನ ನಮ್ಮೊಂದಿಗೆ ಹೆಜ್ಜೆ ಹಾಕಿದರು. 87ರ ಹರೆಯದಲ್ಲೂ ಹುಮ್ಮಸ್ಸಿನಿಂದ ಪಾಲ್ಗೊಂಡರು, ಬಂಗಾರಪ್ಪನವರನ್ನು ನೆನೆದರು. ಈ ಘಟನೆ ಮರೆಯಲಸಾಧ್ಯ.

6. ಯಾತ್ರೆಯಲ್ಲಿ ಕಂಡುಕೊಂಡ ಸತ್ಯ?
ನನ್ನ ತಂದೆ ಪ್ರಾಕ್ಟಿಕಲ್್ ಆಗಿ ಇಂದು ನನ್ನೊಂದಿಗೆ ಇಲ್ಲದಿರಬಹುದು. ಆದರೆ, ಯಾತ್ರೆಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬರ ಮನಸ್ಸು, ಹೖದಯದಲ್ಲಿ ಅಪ್ಪಾಜಿ(ಬಂಗಾರಪ್ಪ)ಯನ್ನು ಕಂಡೆ. ಧನ್ಯನಾದೆ.

7. ಪಾದಯಾತ್ರೆ ಆಯ್ತು, ಮುಂದೇನು?



ನಾವು ಕಾನೂನಿಗೆ ತಲೆ ಬಾಗುತ್ತೇವೆ, ಕಾನೂನಿಗೆ ವಿರುದ್ಧವಾಗಿ ಹೋಗಲಾರೆ. ಅಂದ ಮಾತ್ರಕ್ಕೆ ರೈತರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರ ಜೊತೆಗಿರುತ್ತೇವೆ, ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪಾದಯಾತ್ರೆ ವೇಳೆ ನಡೆಸಿದ ಸಹಿ ಸಂಗ್ರಹಣೆಯನ್ನು ರಾಷ್ಟ್ರಪತಿ, ಪ್ರಧಾನಿಗೆ ಅಪಿ೯ಸಲಾಗುತ್ತದೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ಪಕ್ಷ ನಿಧ೯ರಿಸುತ್ತದೆ. ಇಷ್ಟಕ್ಕೆ ಮುಗೀಲಿಲ್ಲ.

ರಾಜ್ಯದ ಪಶು ಆಸ್ಪತ್ರೆಗಳ ಕಾಯ೯ನಿವ೯ಹಣೆ ವೇಳೆ ಬದಲು

- ಬದಲಾದ ರೈತರು ಹಾಗೂ ಪಶುವೈದ್ಯರ ಕಾಯ೯ಚಟುವಟಿಕೆ
- ಪಶು ಇಲಾಖೆ ಸಂಘಟನೆಗಳಿಂದ ಒತ್ತಡ, ಅಧಿಕಾರಿಗಳ ವರದಿ ಹಿನ್ನೆಲೆ
- ಬೆಳಿಗ್ಗೆ ಅಧ೯ಗಂಟೆ ತಡ ಆರಂಭ, ಅಧ೯ಗಂಟೆ ಮುಂಚಿತವಾಗಿ ಮುಚ್ಚುವ ಕೇಂದ್ರಗಳು

ಶ್ರೀಕಾಂತ ಭಟ್್
ಶಿವಮೊಗ್ಗ- ಪಶು ಸಾಕಾಣಿಕೆದಾರರಿಗೊಂದು ಸುದ್ದಿ, ರಾಜ್ಯದಲ್ಲಿರುವ 3450 ಪಶು ಆಸ್ಪತ್ರೆಯ ಸಮಯ ಬದಲಾಗಿದೆ.
ರೈತರ ಮನಸ್ಥಿತಿ ಮತ್ತು ಕಾಯ೯ಚಟುವಟಿಕೆ ಬದಲಾದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ತನ್ನ ಸಂಸ್ಥೆಗಳ ಕಾಯ೯ನಿವ೯ಹಣೆ ಅವಧಿಯಲ್ಲಿ ಕೊಂಚ ಬದಲಿಸಿಕೊಂಡಿದೆ.
ರಾಜ್ಯ ಸಕಾ೯ರಿ ಪಶು ವೈದ್ಯರ ಸಂಘ, ಆಡಳಿತಾತ್ಮಕ ಅಧಿಕಾರಿಗಳ ಮತ್ತು ನೌಕರರ ಸಂಘ, ಕನಾ೯ಟಕ ಪಶುವೈದ್ಯಕೀಯ ಪರೀಕ್ಷಕರ ಸಂಘ, ರಾಜ್ಯ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಡಿ ಗ್ರೂಪ್್ ನೌಕರರ ಸಂಘ, ರಾಜ್ಯ ಪಶುವೈದ್ಯರ ಸಂಘ, ಕನಾ೯ಟಕ ಪಶು ವೈದ್ಯಕೀಯ ಸಂಘದ ಅಭಿಪ್ರಾಯದ ಆಧಾರದ ಮೇಲ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಇದರ ನಡುವೆಯೇ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉಪ ನಿದೇ೯ಶಕರು ಜಿಲ್ಲಾ ಪಂಚಾಯಿತಿಗಳ ಅಭಿಪ್ರಾಯದೊಂದಿಗೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯ ಸಂಸ್ಥೆಗಳ ಕಾಯ೯ನಿವ೯ಹಣೆಯ ವೇಳೆಯನ್ನು ಬದಲಿಸಲಾಗಿದೆ.
- ಬದಲಾದ ಸಮಯ
ಕೆಲಸದ ದಿನಗಳಲ್ಲಿ ಪಶುವೈದ್ಯ ಸಂಸ್ಥೆಗಳು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ, ಅಪರಾಹ್ನ 3.30ರಿಂದ ಸಂಜೆ 5.30ರವರೆಗೆ ಕಾಯ೯ನಿವ೯ಹಿಸುತ್ತಿತ್ತು. ಇನ್ನು ಮುಂದೆ ಈ ಕೇಂದ್ರಗಳು ಬೆಳಿಗ್ಗೆ 9ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂಟೆ ವರೆಗೆ ಅಪರಾಹ್ನ 3ರಿಂದ ಸಂಜೆ 5 ಗಂಟೆ ವರೆಗೆ ಕಾಯ೯ನಿವ೯ಹಿಸುವುದು. ಅಥಾ೯ತ್್, ಪಶು ಆಸ್ಪತ್ರೆಗಳು ಬೆಳಿಗ್ಗೆ ಅಧ೯ಗಂಟೆ ತಡವಾಗಿ ಆರಂಭವಾಗಿ, ಸಂಜೆ ಅಧ೯ ಗಂಟೆ ಮುಂಚಿತವಾಗಿ ಬಾಗಿಲು ಮುಚ್ಚಲಿವೆ.
ಸಾವ೯ತ್ರಿಕ ರಜಾ ದಿನಗಳಲ್ಲಿ ಈ ಮುಂಚೆ ಬೆಳಿಗ್ಗೆ 8.30ರಿಂದ 12.30ರವರೆಗೆ ಕಾಯ೯ನಿವ೯ಹಿಸುತ್ತಿದ್ದ ಕೇಂದ್ರಗಳು ಇನ್ನು ಮುಂದೆ 9ರಿಂದ 1ಗಂಟೆಗೆ ಕಾಯ೯ನಿವ೯ಹಿಸುವುದು.
ರಾಜ್ಯದ ತಾಲೂಕು ಮಟ್ಟದ ಕೆಳಗಿರುವ ಆಸ್ಪತ್ರೆಗಳಲ್ಲಿ ಈ ತಿಂಗಳಿನಿಂದಲೇ ಬದಲಾದ ಸಮಯದಲ್ಲಿ ಕಾಯ೯ನಿವ೯ಹಣೆಯಾಗಲಿದೆ.

- ಏಕಾಗಿ ಬದಲಾವಣೆ?
ಇತ್ತೀಚಿನ ದಿನಗಳಲ್ಲಿ ರೈತರ ಮನಸ್ಥಿತಿ ಬದಲಾವಣೆಯಾಗಿದೆ. ಜೊತೆಗೆ ಅವರ ಕಾಯ೯ಚಟುವಟಿಕೆಯಲ್ಲಿ ಕೂಡ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ್ದು ಸರಿಯಾದ ಕ್ರಮ ಎನ್ನುತ್ತಾರೆ ಕನಾ೯ಟಕ ಪಶು ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಚ್್. ನಟರಾಜ್್.
ಈ ಮುಂಚೆ ಗ್ರಾಮೀಣ ಭಾಗದಲ್ಲಿ ಜಾನುವಾರನ್ನು ಆಸ್ಪತ್ರೆಗೆ ತರುವ ಪರಿಪಾಟ ಇತ್ತು. ಕೖತಕ ಗಭ೯ಧಾರಣೆ, ಚಿಕಿತ್ಸೆ ಎಲ್ಲಕ್ಕೂ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಆದರೆ, ಈ ಕಾಯ೯ ಬದಲಾಗಿದೆ. ವೈದ್ಯರೇ ರೈತರ ಕ್ಷೇತ್ರಗಳಿಗೆ ಭೇಟಿಕೊಟ್ಟು ಜಾನುವಾರನ್ನು ಪರೀಕ್ಷಿಸುತ್ತಾರೆ, ಚಿಕಿತ್ಸೆ ನೀಡುತ್ತಿದ್ದಾರೆ. ಅದೇ ರೀತಿ ಕೖಷಿ ಕಾಮಿ೯ಕರ ಕೊರತೆಯಿಂದಾಗಿ ರೈತರು ಕೂಡ ಜಾನುವಾರನ್ನು ಆಸ್ಪತ್ರೆಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಶಿವಮೊಗ್ಗದ ಪಶು ವೈದ್ಯರೊಬ್ಬರ ಅಭಿಪ್ರಾಯ.
ಪಶು ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯೋಜನೆ ನಡೆಸುವುದರಿಂದ  ಪಶುವೈದ್ಯರೇ ನೇರವಾಗಿ ಹಳ್ಳಿಗೆ ಭೇಟಿಕೊಡುತ್ತಿದ್ದಾರೆ. ಹೀಗಾಗಿ ಸಮಯ ಬದಲಾವಣೆ ಅವಶ್ಯಕತೆ ಇತ್ತು ಎಂದು ಟಿ.ಎಚ್್. ನಟರಾಜ್್ ಸಮಥಿ೯ಸಿಕೊಳ್ಳುತ್ತಾರೆ. ಅದೇ ರೀತಿ ಮಧ್ಯಾಹ್ನದ ಊಟದ ವಿರಾಮ 2 ಗಂಟೆ ಇದ್ದು, ಇಷ್ಟು ಅಗತ್ಯವಿರಲಿಲ್ಲ ಎಂದು ಎಂದು ಹೇಳಿದ್ದಾರೆ.

Sunday, 8 May 2011


ÈÚßàÁÚß ÈÚÎÚ%VÚØM¥Ú GÁÚsæÞ Ò«æÈÚáÛVÚ×ÚÆÇ «ÚnÒ ÈÚßàÅæVÚßM®ÛWÁÚßÈÚ @¥Û ËÚÈÚß% GM… Èæç¾ÚáÛÀ †æsÚW «Û«Úß ÑÛoÁé AVÚÅæM¥æÞ ÔÚßno¥ÚÈÚ×Úß GM¥æÅÛÇ ÔæÞØOæ Oæàno¥Û§×æ! AOæ¾Úß GMnà ^æ«Û„VæÞ AW}Úß¡. 2008ÁÚÆÇ ÉOÚÃÈÚáé ºÚmé«Ú 1920 GM… _}ÚÃ¥ÚÆÇ «ÚnÒ¥Ú …ØOÚ }æÄßW«Ú @¥ÚÁÚ @ÈÚ}ÚÁÚ{Oæ¾Úᒀ OÛ{ÒOæàMsÚ¥Úß§ ¸loÁæ AOæ¾Úß SÛ}æ¾Úᒀ †æÞÁæ _}ÚÃVÚØÄÇ. OÛ¬µsæ«éÓ @M¥æÃ B¥Ú®Û°!
- kannadaprabha

Monday, 11 June 2007

ಕೆಂಪಾದವೊ... ಎಲ್ಲ ಕೆಂಪಾದವೋ...

‘ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ನನ್ನ ಪತಿಯನ್ನು ಎಳೆದು ಒಂದೇ ಸಮನೆ ಹೊಡೆಯತೊಡಗಿದರು. ತನಗೂ ಪೊಲೀಸರಿಗೂ ಸಂಬಂಧ ಇಲ್ಲ ಎಂದು ನನ್ನ ಪತಿ ಪರಿಪರಿಯಾಗಿ ಬೇಡಿಕೊಂಡರು, ನಾನು ಮತ್ತು ಮಗ ಬಿಟ್ಟು ಬಿಡಿ ಎಂದು ನಕ್ಸಲರ ಕಾಲಿಗೆ ಬಿದ್ದೆವು, ಆದರೂ ಅವರಿಗೆ ಕರುಣೆ ಬರಲಿಲ್ಲ’...

ಈ ಆಕ್ರಂದನದ ನೋವು ಅದೆಷ್ಟು ಮನ ಮುಟ್ಟಿರಬಹುದೋ? ಅದೂ ಬೆಂಗಳೂರಿನಲ್ಲಿ ಕುಳಿತ ಮಂದಿಗೇನು ಗೊತ್ತಾಗಬೇಕು...

ನೆನಪಾಯ್ತಾ, ಜೂನ್ ರಾತ್ರಿ ೭.೫೦ರ ಸುಮಾರಿಗೆ ಶೃಂಗೇರಿಯಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಗಂಡಘಟ್ಟದಲ್ಲಿ ಒಂದು ಮುಗ್ದ ಜೀವ ಹಾರಿಹೋಯಿತು. ನೆಂಟರ ಮನೆಯಲ್ಲಿ ನಡೆಯುವ ತೊಟ್ಟಿಲು ಶಾಸ್ತ್ರಕ್ಕೆ ಹೊರಟ ವೆಂಕಟೇಶ್ ನಕ್ಸಲರ ಆಕ್ರೋಶಕ್ಕೆ ತನ್ನ ಕುಟುಂಬ, ನೆಲ ಎಲ್ಲವನ್ನೂ ಬಿಟ್ಟು ಹೊರಟೇ ಹೋದರು.
ಪತ್ನಿ, ಮಗನ ಆರ್ತನಾದದಿಂದ ನಕ್ಸಲರ ಮನ ಕರಗಲೂ ಇಲ್ಲ. ಅವರ ಹಾರಿಸಿದ ಗುಂಡು, ಬೀಸಿದ ಲಾಂಗಿನ ಹೊಡೆತಕ್ಕೆ ಜರ್ಜರಿತವಾಗಿ ಬಿದ್ದಿತ್ತು ವೆಂಕಟೇಶನ ದೇಹ.
ವರ್ಷದ ಹಿಂದೆ ಚಂದ್ರಯ್ಯನನ್ನು ಅಡ್ಡಡ್ಡಾ ಮಲಗಿಸಿ ಇನ್ನೂ ಸರಿಯಾಗದ ರೀತಿಯಲ್ಲಿ ಮೈಮೂಳೆ ಮುರಿದಾಗಿದೆ. ಶೇಷಯ್ಯ ಗೌಡ್ಲುವನ್ನು ಮನೆ ಮುಂದೇ ಅಟ್ಟಾಡಿಸಿಕೊಂಡು ಕೊಂದಾಗಿದೆ.

...
ಈಗ ಮತ್ತೆ ಮಲೆನಾಡಲ್ಲಿ ಪೊಲೀಸರ ಓಡಾಟ. ಅಲ್ಲಲ್ಲಿ ಸಭೆ, ಕೂಬಿಂಗ್. ಹಾಗೇ ಅತ್ತಿಂದಿತ್ತ ಬಾಲ ಸುಟ್ಟ ಬೆಕ್ಕಿನಿಂದ ತಿರುಗಾಡುತ್ತಿದ್ದಾರೆ. ಆದರೇನು ಪ್ರಯೋಜನ ಮತ್ತೊಂದು ಮುಗ್ದ ಜೀವ ಹೋಗಿಯಾಗಿದೆ.
ಮಲೆನಾಡಲ್ಲಿ ಕೆಂಪುಗಾಳಿ ಬೀಸಿದ್ದರ ಪ್ರತಿಫಲವಾಗಿ ಇದೀಗ ಏಳನೇ ಜೀವ ಹೋಗಿದೆ. ಅದೆಷ್ಟೋ ನೆಮ್ಮದಿ ಕೆಟ್ಟಿದೆ. ಅಕ್ಕಪಕ್ಕದವರನ್ನೂ ನಂಬದ ಸ್ಥಿತಿ. ನೆಮ್ಮದಿಗೆ ಕಲ್ಲು ಬಿದ್ದಿದೆ.
ಅತ್ತ ನಕ್ಸಲರ ಸಹವಾಸವೂ ಇತ್ತ ಪೊಲೀಸರಿಂದಲೂ ದೂರ ಇರಲಾಗದೆ ಬೆಂಕಿಯಿಂದ ಬಾಣಲೆಗೆ ಎಂಬಂತೆ ತತ್ತರಿಸಿ ಹೋಗಿದ್ದಾರೆ.
ನಕ್ಸಲರ ಪ್ರತಿಕಾರ ಭಾವನೆಗೆ ಈಗ ಬಲಿಯಾದ ವೆಂಕಟೇಶ್ ಕೆಸಮುಡಿ ಎನ್‌ಕೌಂಟರ್‌ಗೆ ಉತ್ತರವಂತೆ. ಆತ ಪೊಲೀಸರ ಇನ್‌ಫಾರ್‍ಮರ್ ಎಂಬ ಆರೋಪ. ಹೇಗಿದೆ ಪರಿಸ್ಥಿತಿ. ಪ್ರತೀಕಾರದ ನೆಪ. ಆದರೆ ಗಂಡಘಟ್ಟದಲ್ಲಿ ವೆಂಕಟೇಶನಿಗೆ ಉತ್ತಮ ಹೆಸರಿತ್ತು. ಸಣ್ಣ ವ್ಯಾಪಾರ ಮಾಡಿಕೊಂಡು ಈತ ಜೀವನ ನಿರ್ವಹಿಸುತ್ತಿದ್ದ. ಸ್ಥಳೀಯರು ಹೇಳುವಂತೆ ಈತನು ನಕ್ಸಲರ ತಂಟೆಗೆ ಹೋದವನೇ ಅಲ್ಲ.
ಈ ಮುಂಚೆ ಹೆಮ್ಮಿಗೆ ಚಂದ್ರಕಾಂತನ ಮೇಲೆ ಹಲ್ಲೆ ನಡೆಸಿದ ನಕ್ಸಲರು ೨೦೦೫ ರ ಮೇ ೧೭ರಂದುಶೇಷೇಗೌಡ್ಲು ಹತ್ಯೆ ಮಾಡಿದ್ದರು. ಜಿಲ್ಲೆಯಲ್ಲಿ ವೆಂಕಟೇಶ್ ನಕ್ಸಲರಿಗೆ ಎರಡನೇ ಬಲಿಯಾಯಿತು.
ಸಾಕೇತ ರಾಜನ್ ಸಾವಿಗೆ ಸೇಡು ತೀರಿಸಿಕೊಳ್ಳಲು ಶೇಷಯ್ಯಗೌಡ್ಲು ಹತ್ಯೆ ಮಾಡಿದ್ದರೆ, ದಿನಕರನ ಸಾವಿಗೆ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ.
ಉದ್ಯಾನವ್ಯಾಪ್ತಿ ಪ್ರದೇಶದಲ್ಲಿ ನಕ್ಸಲರು ತಮ್ಮ ಕುರಿತು ಜನರಿಗೆ ತೀವ್ರ ಭಯ ಮೂಡಿಸುವ ಪ್ರಯತ್ನವಾಗಿ ವೆಂಕಟೇಶನನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸರ್ಕಾರದ ವಿರುದ್ಧ ಒಂದು ರೀತಿಯ ಸೇಡಿನ ಭಾವನೆ ಜನರಲ್ಲೂ ವ್ಯಾಪಿಸತೊಡಗಲು ಪ್ರಾರಂಭವಾಗಿದೆ. ತಮ್ಮ ನೆರೆ ಹೊರೆಯವರ ಮೇಲೆ ದಾಳಿ ನಡೆಯುತ್ತಿದೆ. ಮುಂದೊಂದು ದಿನ ತಮ್ಮ ಮೇಲೂ ನಡೆದೀತೆಂಬ ಆತಂಕ ಹೆಚ್ಚಿದೆ. ಸರ್ಕಾರ ಜನರ ರಕ್ಷಣೆಗೆ ಬರದೇ ತೆಪ್ಪಗೆ ಕುಳಿತಿರುವುದಕ್ಕೆ ಅಸಮಾಧಾನದ ಹೊಗೆ ಎದ್ದಿದೆ. ಅದು ಶೃಂಗೇರಿ ಬಂದ್ ಮೂಲಕ ವ್ಯಕ್ತವಾಯಿತು.

ಪರಿಹಾರ ಕೊಟ್ಟರೆ ಮುಗೀತೆ...
ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಂತೆ ಸರ್ಕಾರ ಈಗ ಪರಿಹಾರ ಕೊಟ್ಟಿದೆ. ಆದರೆ ಅದರ ಮುಂದೀಗ ದೊಡ್ಡ ಸವಾಲಿದೆ. ಎಂ.ಪಿ. ಪ್ರಕಾಶ್ ಹೀಗೆ ಹೇಳುತ್ತಾರೆ... ‘ನಕ್ಸಲರನ್ನು ಮದ್ದು ಗುಂಡಿನಿಂದ ಮಟ್ಟ ಹಾಕಲು ಸಾಧ್ಯವಿಲ್ಲ, ಆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕು ಅಷ್ಟೇ’.
ಹೀಗೇ ಹೇಳಿದರೆ ಆಯಿತೇ ಎಂಬುದು ಪ್ರಶ್ನೆ. ಈ ಭಾಗದಲ್ಲಿ ನಡೆಯುವ ದೊಡ್ಡ ಮಟ್ಟದ ನಕ್ಸಲ್ ಸಂಬಂಧಿತ ಘಟನೆ ನಂತರ ಸರ್ಕಾರದಿಂದ ಬರುತ್ತಿರುವ ಮಾತು. ಆದರೆ ಉಪಯೋಗವಾಗೇ ಇಲ್ಲ. ಇಂತಹ ಘಟನೆಗೆ ಸರ್ಕಾರವೂ ಹೊಣೆ ಹೋರಲೇಬೇಕಾಗಿದೆ. ಘಟನೆ ಪುನರಾವರ್ತನೆ ಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಮಾನವ ಹಕ್ಕು ಆಯೋಗ ನಕ್ಸಲರ ಹತ್ಯೆಯಾದಾಗ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಏನೆಲ್ಲಾ ಮಾಡಿತೆಂದುಗೊತ್ತಿದೆ. ಆದೇ ನಕ್ಸಲರಿಂದ ಜೀವವೊಂದು ಹೋಯಿತೆಂದರೆ ಅದು ತಣ್ಣಗಾಗಿ ಬಿಡುತ್ತಿದೆ.
ಅದೇ ರೀತಿ ರಾಜ್ಯದಲ್ಲಿ ನಕ್ಸಲ್ ನಿಗ್ರಹ ದಳ ರೂಪುಗೊಂಡರೂ ನಕ್ಸಲೀಯರನ್ನು ನಿಗ್ರಹಿಸುವ ತೀರಾ ಹಿಂದುಳಿದಿದೆ. ನಕ್ಸಲೀಯರು ಮಲೆನಾಡಿಗೆ ಅಡಿಯಿಟ್ಟು ಐದು ವರ್ಷಗಳೇ ಕಳೆದಿವೆ. ಈ ಐದು ವರ್ಷಗಳಲ್ಲಿ ನಡೆದಿರುವ ಒಟ್ಟಾರೆ ಘಟನೆಗಳನ್ನು ಗಮನಿಸಿದರೆ ಪೊಲೀಸರಿಗಿಂತ ನಕ್ಸಲರದೇ ಮೇಲುಗೈ.
ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಯಿತು. ಜೀಪು, ಕಂಪ್ಯೂಟರ್, ವಿಸಿಆರ್ ಮತ್ತು ಕಡತ ಬೆಂಕಿಗೆ ಆಹುತಿಯಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಜೀವಭಯದಲ್ಲಿ ಕೆಲಸ ಮಾಡುವ ಹಾಗಾಯಿತು.
ಪಶ್ಚಿಮಘಟ್ಟದ ದಟ್ಟ ಕಾನನ ಮಧ್ಯೆ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡಿನಲ್ಲಿ ರಕ್ತದ ಕೋಡಿ. ಶಾಂತಿಯ ನೆಲವೀಡಲ್ಲಿ ಈಗ ಗುಂಡಿನ ಸದ್ದು, ಕಾಳಗ, ಚಕಮಕಿ, ಅಪಹರಣ, ಹಲ್ಲೆ, ಕಾರ್ಯಾಚರಣೆ ಕೊನೆಗೆ ಸಾವಿನಲ್ಲಿ ಮುಕ್ತಾಯ. ಹೀಗೆ ಮಲೆನಾಡಿನಿಂದ ತುಂಗೆ, ಭದ್ರ ಹಾಗೇ ನೇತ್ರಾವತಿ ನದಿ ಹರಿಯುತ್ತಿದ್ದು ಅದರೊಂದಿಗೆ ರಕ್ತೇಶ್ವರಿ ಹರಿಯಲು ಸಿದ್ದತೆ ನಡೆಸಿದ್ದಾಳೆ. ರಕ್ತದ ತೊಟ್ಟು ಬೀಳಲಾರಂಭಿಸಿದೆ. ಹಲಿ ಗೂಡಿದರೆ ಹಳ್ಳ, ಹಳ್ಳ ಸೇರಿ ನದಿ....
ನಕ್ಸಲರ ವಿರುದ್ಧ ಈಗ ಪ್ರಬಲ ಜನಾಂದೋಲನ ಹುಟ್ಟಬೇಕಾದ್ದೊಂದೇ ಈ ಎಲ್ಲಾ ಸಮಸ್ಯೆ ಉತ್ತರವೇ?

ಕೆಂಪಾದವೊ... ಎಲ್ಲ ಕೆಂಪಾದವೋ...
ಹಸಿರಿದ್ದ ಗಿಡಮರ, ಬೆಳ್ಳಗಿದ್ದ ಹೂವೆಲ್ಲಾ
ನೆತ್ತಾರು ಸುರಿದಂಗೆ ಕೆಂಪಾದವೋ
ಹೂವು ಬಳ್ಳಿಗಳೆಲ್ಲಾ ಕೆಂಪಾದವೋ,
ಊರು ಕಂದಮ್ಮಗಳು ಕೆಂಪಾದವೋ
....
ಭೂಮಿಯು ಎಲ್ಲಾನು ಕೆಂಪಾದವೋ...

ಲಂಕೇಶ ಅವರ ಈ ಸಾಹಿತ್ಯ ಮಲೆನಾಡಿಗೆ ಈಗ ಅನ್ವಯ.

Thursday, 24 May 2007

ಕಾಳಿಂಗಸರ್ಪಗಳ ರಾಜಧಾನಿ... ಆಗುಂಬೆ

ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ.ಕಾಳಿಂಗ ಸರ್ಪ ಅಲಿಯಾಸ್ ಕಿಂಗ್‌ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು. ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್.೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್‌ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ ದರ್ಶನವಾಯಿತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಕಾಳಿಂಗ ಹಾವು ಕಾಣಿಸಿಕೊಂಡಿತು. ಮತ್ತು ಕಾಳಿಂಗನ ಬಗ್ಗೆ ಇಲ್ಲಿನ ಜನರು, ಅಂಗಡಿ ಕಟ್ಟೆಗಳಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಅವರಿಗೆ ಕುತೂಹಲ ಹೆಚ್ಚಿತು. ನಂತರ ಕಾಳಿಂಗನಬಗ್ಗೆ ರಿಸರ್ಚ್ ಮಾಡಲು ನಿರ್ಧರಿಸಿಯೇ ಬಿಟ್ಟರಂತೆ. ಹೀಗೆ ವಿವರಿಸಿದ್ದು ಅವರ ಶಿಷ್ಯ ಗೌರಿಶಂಕರ್.ಈ ಕಾಳಿಂಗ ರಾಜಧಾನಿಯಲ್ಲಿಗ ‘ರಾಜರ’ ರಿಸರ್ಚ್ ನಡೆಯುತ್ತಿದೆ. ಅವರ ಹಾವ- ಭಾವ, ಸಂತಾನ... ಹೀಗೆ ದಾಖಲಾತಿ ಆಂದೋಲನ.ಈ ಆಂದೋಲನದ ಪ್ರಥಮ ಮಾಹಿತಿ ಪ್ರಕಾರ ಆಂಗುಬೆ ಕಾಳಿಂಗನ ರಾಜಧಾನಿ ಎಂಬುದು ಬಹುತೇಕ ಖಚಿತವಾಗುವಂತೆ ಅಂಶಗಳು ಕಂಡುಬಂದಿವೆ.ಆಗುಂಬೆಯಲ್ಲಿ ವಿಟೇಕರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಈಗ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೊಂದು ವರ್ಷದಲ್ಲಿ ಕಾಳಿಂಗ ಸರ್ಪದ ಸಾಕಷಷ್ಟು ಮಾಹಿತಿ ಸಿದ್ದವಾಗುತ್ತದೆ.ಇದರ ಬಗ್ಗೆ ರಿಸರ್ಚ್ ನಡೆಸಿ ಪ್ರಪಂಚಕ್ಕೆ ಮಾಹಿತಿ ನೀಡಲು ವಿಟೇಕರ್ ನೇತೃತ್ವದ ತಂಡ ಶ್ರಮಿಸುತ್ತಿದೆ.ಕಳೆದ ೨೨ ತಿಂಗಳಿಂದ ಮಳೆಕಾಡು ಸಂಶೋಧನಾ ಕೇಂದ್ರ ಈ ಕುರಿತು ತನ್ನ ಚಟುವಟಿಕೆ ಪ್ರಾರಂಭಿಸಿದ್ದು, ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಕಾಳಿಂಗನ ನಡೆದಾಟದ ಬಗ್ಗೆ ಅಬ್ಸರ್‌ವೇಶನ್ ಕಾರ್‍ಯ ನಡೆದಿದೆ.‘ನಾವೀಗ ರೇಡಿಯೋ ಟೆಲಿಮೀಟರ್ ಮತ್ತು ಮೆಡಿಕಲ್ ಕ್ಯುಟೆರಿ ತಂತ್ರಜ್ಞಾನದ ಮೂಲಕ ಪರಿಶೀಲನಾ ಕಾರ್‍ಯ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ. ಇದನ್ನು ಬಳಸಲು ಅರಣ್ಯ ಇಲಾಖೆಯಿಂದ ಪರ್‍ಮಿಶನ್ ಬೇಕು. ನಂತರ ಕಾಳಿಂಗ ಸರ್ಪದ ಮೇಲೆ ಪ್ರಯೋಗ ಪ್ರಾರಂಭವಾಗುತ್ತದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಮುಖ್ಯ ಅಧಿಕಾರಿ ಪಿ. ಗೌರಿಶಂಕರ್.ಗೌರಿಶಂಕರ್ ಹೇಳುವಂತೆ, ಅವರು ಇಲ್ಲಿಗೆ ಬಂದ ನಂತರ ಸಮೀಪದ ಮನೆ, ಕೊಟ್ಟಿಗೆ, ಬಾವಿಯಲ್ಲಿ ಕಂಡುಬಂದ೫೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದಿದ್ದಾರೆ. ಅದೂ ಸುತ್ತಮುತ್ತಲ ಹಳ್ಳಿಗಳ ಮನೆಗಳಲ್ಲಿ ಸೇರಿಕೊಂಡಿರುವ ಕಾಳಿಂಗನನ್ನು ಹಿಡಿಯಲಾಗಿದೆ. ಹಾಗೆ ಅದನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಬಿಡಲಾಗಿದೆ.ಈ ವರೆಗೆ ಕಾಡಿನಲ್ಲಿ ಸಿಕ್ಕ ಕಾಳಿಂಗನ ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ನಂತರ ೧೮ ತಿಂಗಳಲ್ಲಿ ಸುಮಾರು ೧೧೯ ಮರಿಗಳನ್ನು ಪುನಃ ಕಾಡಿಗೆ ಬಿಡಲಾಗಿದೆ.
ಕಾಳಿಂಗನ ಬಗ್ಗೆ...ದೊಡ್ಡದಾದ ಶರೀರ, ನುಣುಪಾದ ಹೊಳೆಯುವ ಹುರುಪೆಗಳು; ಪ್ರಧಾನವಾಗಿ ಶರೀರದ ಮುಂಭಾಗದಲ್ಲಿ ವಿಶಿಷ್ಟವಾದ ಬಿಳಿಯ ಅಡ್ಡ ಪಟ್ಟೆಗಳು, ದೊಡ್ಡದಾದ ಕಲೆ, ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣವಿರುತ್ತದೆ.ಹುಟ್ಟಿದಾಗ ೫೦ ಸೆಂಟಿಮೀಟರ್ ಇದ್ದು, ಸರಾಸರಿ ಮೂರು ಮೀಟರ್ ಇರುತ್ತದೆ. ಇನ್ನು ಗರಿಷ್ಠ ೫ ಮೀಟರ್ ಇರುತ್ತದೆ.ಬೃಹತ್ ಗಾತ್ರದ ಕಾಳಿಂಗ ಸರ್ಪದ ದೊಡ್ಡ ತಲೆಯು ಗುತ್ತಿಗೆಗಿಂತ ಸ್ವಲ್ಪ ಅಗಲವಾಗಿರುತ್ತದೆ. ತಲೆಯ ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ ಇರುತ್ತದೆ.ಹಳದಿಯಿಂದ ದಟ್ಟವಾದ ಆಲಿವ್ ಹಸಿರಿನವರೆಗೆ ಶರೀರದ ಒಟ್ಟು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಬಾಲವು ಕೆಲವೊಮ್ಮೆ ಕಡು ಕಪ್ಪು ಬಣ್ಣ ಇರುತ್ತದೆ.ಶರೀರದ ತಳ ಭಾಗದ ಬಣ್ಣವು ಮೇಲ್ಘಾಗದ ಬಣ್ಣದಂತೆಯೇ ಇದ್ದು, ಸ್ವಲ್ಪ ತಿಳಿಯಾಗಿರುತ್ತದೆ.ಇದು ಪ್ರಧಾನವಾಗಿ ಹಾವುಗಳನ್ನು ಮತ್ತು ಕೆಲವೊಮ್ಮೆ ಹಲ್ಲಿಗಳನ್ನು ತಿನ್ನುತ್ತವೆ. ಕೇರೆ ಹಾವು ಮತ್ತು ಚೌಕಳಿ ಬೆನ್ನೇಣು ಹಾವುಗಳಂತಹ ದೊಡ್ಡ ಹಾವುಗಳೇ ಇದರ ಪ್ರಮುಖ ಆಹಾರವಾಗಿರುವುದಂತೆ ಕಾಣುತ್ತದೆ. ಗರಿಷ್ಟ ವಯೋಮಾನ ೩೦ ವರ್ಷ.ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಕಡಿಮೆ ಪರಿಣಾಮ ಉಂಟುಮಾಡುವಂಥದ್ದು. ಆದರೆ ವಿಷ ಆನೆಯನ್ನೂ ಸಾಹಿಸಬಲ್ಲದು.ಥೈಲ್ಯಾಂಡಿನಲ್ಲಿ ಮಾತ್ರ ಈ ಹಾವಿನ ಕಡಿತದ ಚಿಕಿತ್ಸೆಗೆ ಬೇಕಾದ ಪ್ರತಿ ವಿಷ ದೊರೆಯುತ್ತದೆ.ಭಾರತದಲ್ಲಿ ಇವು ಅಪರೂಪವಾದರೂ ಬಹುತೇಕ ಪಶ್ಚಿಘಟ್ಟದಲ್ಲೇ ಹೆಚ್ಚಾಗಿ ಇದೆ. ಅಸ್ಸಾಂನ ಕಾಫಿ ಟೀ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.ಆವಾಸ ಸ್ಥಾನ ಹೆಚ್ಚಾಗಿ ಮಳೆ ಬೀಳುವ ಪ್ರದೇಶ, ಮತ್ತು ದಟ್ಟ ಸಸ್ಯ ರಾಶಿ ಇರುವೆಡೆ.ಹೆಣ್ಣು ಕಾಳಿಂಗ ಎಲೆಗಳಿಂದ ಗೂಡನ್ನು ನಿರ್ಮಿಸುತ್ತದೆ. ಗೂಡು ನಿರ್ಮಿಸಿಕೊಳ್ಳುವ ಜಗತ್ತಿನ ಏಕೈಕ ಹಾವುಕೂಡ ಇದಾಗಿದೆ.ಇನ್ನೊಂದು ಮಹತ್ವದ ಅಂಶ ಎಂದರೆ ಕಾಳಿಂಗ ಆಕ್ರಮಣದ ಸ್ವಭಾವ ಎಂದೆಲ್ಲಾ ಕೇಳಿದ್ದೇವೆ. ಆದರೆ ಅದು ಹೆಚ್ಚಿನ ಮಟ್ಟಗೆ ಕಲ್ಪನೆಯೇ. ದಾಖಲೆಗಳು ಹೇಳುವ ಪ್ರಕಾರ ಇವು ಸಾಧು ಸ್ವಭಾವದ ಸರ್ಪಗಳು. ಆಕ್ರಮಣ ಮಾಡಲು ಇಷ್ಟಪಡವು ಮತ್ತು ಸಾಧ್ಯವಾದಾಗಲೆಲ್ಲಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ.ನಿಸರ್ಗದ ನಡುವೆ ನೋಡಲು ಕಾಳಿಂಗ ಸರ್ಪ ನಿಜವಾಗಿಯೂ ಭಯಾನಕವಾಗಿವೆ. ಅದನ್ನು ಗಾಯಗೊಳಿಸಿದಾಗ ಅಥವಾ ನಿರ್ಬಂಧಿಸಿದಾಗ ಮಾತ್ರ ಅದು ಬಾಯ್ತೆರೆದು ಜೋರಾಗಿ ಬುಸುಗುಟ್ಟುತ್ತಾ ಆಕ್ರಮಣದ ಮಾಡಿದ ವ್ಯಕ್ತಿಯ ಮೇಲೆರಗಬಹುದು.ಇತರೆ ಹಾವುಗಳಿಗೆ ಅಪರೂಪದವಾದ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ಕಾಳಿಂಗ ಸರ್ಪಗಳು ವರ್ತಿಸುತ್ತವೆ.