Wednesday 12 September, 2012


ಇಷ್ಟಕ್ಕೆ ಮುಗೀಲಿಲ್ಲ- ನಾವು ರೈತರನ್ನು ಕೈ ಬಿಡಲ್ಲ- ಮಧು

ಮಧು ಉವಾಚ
- ಹೋರಾಟ ಪ್ರಶ್ನಿಸುವ ಹಕ್ಕು ಬಿಜೆಪಿ, ಕಾಂಗ್ರೆಸ್್ಗಿಲ್ಲ
- ನನ್ನ ಜೊತೆ ಹೆಜ್ಜೆ ಹಾಕಿದವರಲ್ಲಿ ಅಪ್ಪಾಜಿಯ ಕಂಡೆ
- ಹೋರಾಟ ಮಾಡಿ ಅಧಿಕಾರ ಪಡೆದ ಬಿಎಸ್್ವೈ ಈಗ ಎಲ್ಲಿಹೋದ್ರು?


ಸಂದಶ೯ನ- ಶ್ರೀಕಾಂತ ಭಟ್್

ಶಿವಮೊಗ್ಗ- ಹತ್ತಾರು ನಾಯಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ಕೊಟ್ಟ ಬಗರ್್ಹುಕುಂ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಬೀದಿಗಳಿದ ಮಧು ಬಂಗಾರಪ್ಪ ಈಗ ಜಿಲ್ಲೆಯಲ್ಲಿ ಲೈಮ್್ಲೈಟ್್ನಲ್ಲಿರುವ ಯುವ ನಾಯಕ. ಕಳೆದ ತಿಂಗಳು ಒತ್ತುವರಿ ತೆರವಿನ ದುಸ್ವಪ್ನ ಕಂಡಿದ್ದ ಸೊರಬ ತಾಲೂಕಿನ ಕೆರೆಹಳ್ಳಿಯಿಂದ ಹೊರಟ ಜೆಡಿಎಸ್್ ಪಾದಯಾತ್ರೆಯನ್ನು ಮುನ್ನೆಡಿಸಿದ್ದು ಅವರೇ. ದಾರಿಯುದ್ದಕ್ಕೂ ಜಿಟಿಜಿಟಿ ಮಳೆ, ಕಿಚಿಪಿಚಿ ಕೆಸರನ್ನು ಲೆಕ್ಕಿಸದೇ ಪಾದಯಾತ್ರೆ ಭಾನುವಾರ ಶಿವಮೊಗ್ಗದಲ್ಲಿ ಸಂಪನ್ನಗೊಂಡಿತು. ಈ ಹೊತ್ತಿನಲ್ಲಿ ಮಧು ಬಂಗಾರಪ್ಪ ಮುಖದಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು. ಪಾದಯಾತ್ರೆಯಿಂದಾಗಿ ಕಾಲಿನಲ್ಲಿ ಬೊಬ್ಬೆ ಎದ್ದಿದ್ದರೂ ಉತ್ಸಾಹದಿಂದ ಓಡಾಡಿಕೊಂಡಿದ್ದ ಮಧು ಬಂಗಾರಪ್ಪ ಅವರನ್ನು ಕನ್ನಡಪ್ರಭ ಮಾತಿಗೆಳೆದಾಗ ಅವರು ಅನೇಕ ಸಂಗತಿಗಳನ್ನು ಹರಿಯಬಿಟ್ಟರು.

1. ಯಾತ್ರೆಯ ಗುರಿ ಈಡೇರಿತಾ?
ಗುರಿ ಈಡೇರಿತಾ ಎನ್ನುವುದಕ್ಕೆ, ಗುರಿ ಈಡೇರಿಸುವ ಕೊಡುವ ಹಕ್ಕು ನಮ್ಮ ಕೈಯಲ್ಲಿ ಇಲ್ಲ. ನಾವು ವಿರೋಧಪಕ್ಷದಲ್ಲಿದ್ದೇವೆ. ಅದು ಯಾವುದೇ ಕಾರಣಕ್ಕೂ ಈಡೇರಿಸುತ್ತೇವೆ ಎಂಬುದು ಬರುವುದಿಲ್ಲ. ಸಾವ೯ಜನಿಕವಾಗಿ ಒಳ್ಳೆಯದಾಗಬೇಕೆಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಗಟ್ಟಿಯಾದ ಹೆಜ್ಜೆ ಇಟ್ಟಿದ್ದೇವೆ.

2. ಯಾತ್ರೆ ಹಿಂದಿನ ಸ್ಪಷ್ಟ ಉದ್ದೇಶ ಏನಾಗಿತ್ತು?
ಬಗರ್್ ಹುಕುಂ ಒಂದು ಸೂಕ್ಷ್ಮ ವಿಚಾರ. 50-60 ವಷ೯ದ ಹಿಂದೆ ನನ್ನ ದೇಶ, ನನ್ನ ಜಾಗ, ದುಡಿದು ತಿನ್ನುತ್ತೇನೆ ಎಂದು ಜನರ ಭಾವನೆ ಇತ್ತು. ಹೀಗಾಗಿ ಬಗರ್್ಹುಕುಂ ಸೖಷ್ಟಿಯಾಗಿದೆ. ಸೈನಿಕರು ರಾಷ್ಟ್ರ ಕಾಪಾಡುತ್ತಾರೆ. ಅಂತಹ ರಕ್ಷಣೆ ಕೊಡುವ ಜವಾನನಿಗೆ ಕೊಡುವ ಬೆಂಬಲ ಗೌರವವನ್ನು ಹಸಿದ ಹೊಟ್ಟೆಗೆ ಅನ್ನ ಕೊಟ್ಟುವ ರೈತನಿಗೂ ನೀಡಬೇಕು. ಬಗರ್್ ಹುಕುಂ ಎಂದಾಕ್ಷಣ ರೈತರೇನು ಭಯೋತ್ಪಾದಕರೇ, ಅವರಿಗೆ ಹಕ್ಕುಗಳಿಲ್ಲವೇ. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವವರು ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ನಿಧಾ೯ರಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಸುವ ದೖಷ್ಟಿಯಿಂದ ಹೋರಾಟ. ಇದರ ಹೊರತಾಗಿ ಬೇರೆ ಉದ್ದೇಶವಿಲ್ಲ.

3. ಮಧು ಬಂಗಾರಪ್ಪ ಇಷ್ಟು ದಿನ ಮಲಗಿದ್ದರು, ಈಗ ಎದ್ದಿದ್ದಾರೆ ಹಾಗೆಯೇ ಇಷ್ಟು ದಿನ ಏನು ಮಾಡುತ್ತಿದ್ದರೂ ಎಂದು ಆಡಳಿತ ಪಕ್ಷದ ನಾಯಕರು ಹೋರಾಟದ ಬಗ್ಗೆ ಟೀಕೆ ಮಾಡಿದರು, ನೀವೆನಂತೀರಾ?
ಹೌದು ನಾನು ಮಲಗಿದ್ದೆ ಎಂದೇ ಹೇಳುತ್ತೇನೆ. ಹಾಗಾದರೆ ಇಷ್ಟು ದಿನ ಟೀಕೆ ಮಾಡಿದವರು ಏನು ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಲಿ. ಅಧಿಕಾರವಿದೆ, ಕೇಂದ್ರದ ಮೇಲೆ ಬಿಗಿ ಪಟ್ಟು ಹಾಕಿ ಕಾನೂನು ತಿದ್ದುಪಡಿ ಮಾಡಿಸಬಹುದಿತ್ತಲ್ಲವೇ. ಅವರಿಂದೇಕೆ ಸಾಧ್ಯವಾಗಲಿಲ್ಲ. ಖಚು೯ಗಾಗಿ ಹೋರಾಟ ಮಾಡಿ ರೈತರನ್ನೇ ಮರೆತರು. ನನ್ನ ವಯಸ್ಸು, ಅನುಭವ ಅವರಿಗಿಂತ ಕಡಿಮೆಯೇ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಟೀಕಿಸುವ ಬದಲು ಕೆಲಸ ಮಾಡಿ ತೋರಿಸಲಿ. ರೈತರ ಕಷ್ಟಕ್ಕೆ ಆಗಿಬರಲಿ.

4. ನಿಮ್ಮ ಹೋರಾಟವನ್ನು ಪ್ರಶ್ನಿಸುವ ಪ್ರತಿಪಕ್ಷಗಳಿಗೆ ನಿಮ್ಮ ಪ್ರತಿ ಪ್ರಶ್ನೆಗಳೇನು?
ಬಿಎಸ್್ ಯಡಿಯೂರಪ್ಪ ಬಗರ್್ಹುಕುಂ ರೈತರ ಪರವಾಗಿ ಪಾದ ಯಾತ್ರೆ ಮಾಡಿ ನಾಯಕರಾದರು. ಈಗ ಎಲ್ಲಿ ಹೋಯಿತು ಹೋರಾಟ. ಅವರಿಂದೇಕೆ ಹಕ್ಕುಪತ್ರಕೊಡಿಸಲು ಸಾಧ್ಯವಾಗಿಲ್ಲ ಎಂದು ಕೇಳುತ್ತೇನೆ. ನಿಮಗೆ ನಮ್ಮ ಹೋರಾಟ ಪ್ರಶ್ನಿಸುವ ಹಕ್ಕಿಲ್ಲ ಎಂದೇ ಬಿಜೆಪಿ ಹಾಗೂ ಕಾಂಗ್ರೆಸ್್ ನಾಯಕರಿಗೆ ಹೇಳುತ್ತೇನೆ ಎಂದರು.

5. ಯಾತ್ರೆಯಲ್ಲಿ ಕಂಡ ವಿಶೇಷ ಅನುಭವ?
ಪ್ರತಿ ಹೆಜ್ಜೆ ಹೆಜ್ಜೆಗೂ ಕಂಕಣ ಕಟ್ಟಿದರು, ಆರತಿ ಬೆಳಗಿದರು, ಆತ್ಮೀಯವಾಗಿ ಸ್ವಾಗತಿಸಿದರು. ನಿರೀಕ್ಷೆಗೆ ಮೀರಿದ ಬೆಂಬಲ ಸಿಕ್ಕಿತು. ಅದೇ ರೀತಿ ಹೊಸನಗರದ ಶೇಷಪ್ಪ ಎಂಬುವರು ದಾರಿಯಲ್ಲಿ ಬಿದ್ದಿದ್ದ ಕರಪತ್ರವನ್ನು ನೋಡಿ ಹೋರಾಟದಲ್ಲಿ ಪಾಲ್ಗೊಂಡರು, ಪ್ರತಿ ದಿನ ನಮ್ಮೊಂದಿಗೆ ಹೆಜ್ಜೆ ಹಾಕಿದರು. 87ರ ಹರೆಯದಲ್ಲೂ ಹುಮ್ಮಸ್ಸಿನಿಂದ ಪಾಲ್ಗೊಂಡರು, ಬಂಗಾರಪ್ಪನವರನ್ನು ನೆನೆದರು. ಈ ಘಟನೆ ಮರೆಯಲಸಾಧ್ಯ.

6. ಯಾತ್ರೆಯಲ್ಲಿ ಕಂಡುಕೊಂಡ ಸತ್ಯ?
ನನ್ನ ತಂದೆ ಪ್ರಾಕ್ಟಿಕಲ್್ ಆಗಿ ಇಂದು ನನ್ನೊಂದಿಗೆ ಇಲ್ಲದಿರಬಹುದು. ಆದರೆ, ಯಾತ್ರೆಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಪ್ರತಿಯೊಬ್ಬರ ಮನಸ್ಸು, ಹೖದಯದಲ್ಲಿ ಅಪ್ಪಾಜಿ(ಬಂಗಾರಪ್ಪ)ಯನ್ನು ಕಂಡೆ. ಧನ್ಯನಾದೆ.

7. ಪಾದಯಾತ್ರೆ ಆಯ್ತು, ಮುಂದೇನು?



ನಾವು ಕಾನೂನಿಗೆ ತಲೆ ಬಾಗುತ್ತೇವೆ, ಕಾನೂನಿಗೆ ವಿರುದ್ಧವಾಗಿ ಹೋಗಲಾರೆ. ಅಂದ ಮಾತ್ರಕ್ಕೆ ರೈತರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರ ಜೊತೆಗಿರುತ್ತೇವೆ, ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪಾದಯಾತ್ರೆ ವೇಳೆ ನಡೆಸಿದ ಸಹಿ ಸಂಗ್ರಹಣೆಯನ್ನು ರಾಷ್ಟ್ರಪತಿ, ಪ್ರಧಾನಿಗೆ ಅಪಿ೯ಸಲಾಗುತ್ತದೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ಪಕ್ಷ ನಿಧ೯ರಿಸುತ್ತದೆ. ಇಷ್ಟಕ್ಕೆ ಮುಗೀಲಿಲ್ಲ.

No comments: